ಸರ್ಕಾರ ಹಿಂದುಳಿದ ವರ್ಗದವರಿಗೆ (OBC’s) ಅರ್ಥಿಕ ಸಹಾಯ ನೀಡಿ ಅವರು ತಮ್ಮ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಕಾರ ನೀಡಿದೆ
ಯೋಜನೆ/ಸೇವೆಗಳು
ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ
ಶುಲ್ಕ ರಿಯಾಯಿತಿ
ವಿದ್ಯಾಸಿರಿ
ಅರ್ಹತೆ
ಹನ್ನೊಂದನೇ ತರಗತಿಯಿಂದಿಡಿದು ಪಿಎಚ್ ಡಿ ಮಾಡುತ್ತಿರುವ ವಿದ್ಯಾರ್ಥಿಗಳವರೆಗು
ಮುಸ್ಲಿಂ, ಕ್ರೈಸ್ತ, ಜೈನ, ಬೌದ್ದ, ಸಿಖ್ ಮತ್ತು ಪಾರ್ಸಿಗಳ ಹೊರತುಪಡಿಸಿ ಬೇರೆಲ್ಲಾ ಹಿಂದುಳಿದ ಹಾಗು OBCಗಳು ಅರ್ಹರು
ರೂ 2.5 ಲಕ್ಷ ವಾರ್ಷಿಕ ವರಮಾನವಿರುವ ಕ್ಯಾಟಗರಿ 1 ವಿದ್ಯಾರ್ಥಿಗಳು ಹಾಗು ರೂ 1 ಲಕ್ಷ ವರಮಾನವಿರುವ ಕ್ಯಾಟಗರಿ IIA, IIIA, IIIB, OBC ಮತ್ತು ಇತರ OBC ವಿದ್ಯಾರ್ಥಿಗಳು
ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಹರ
ಹಿಂದಿನ ತರಗತಿ/ಸೆಮಿಸ್ಟರ್ಗಳಲ್ಲಿ ಉತ್ತಿರ್ಣರಾಗಿರಬೇಕು
ಆಗಲೇ ಬೇರೊಂದು ವಿದ್ಯಾರ್ಥಿವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಹರಲ್ಲ
ಪೋಷಕರ ಇಬ್ಬರು ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿವೇತನ. ಹೆಣ್ಣು ಮಕ್ಕಳಿಗೆ ಈ ನಿರ್ಭಂದ ಅನ್ವಯವಾಗುವುದಿಲ್ಲ
ಮೆಟ್ರಿಕ್ ತರಗತಿ ಮುಗಿಸಿದ ನಂತರ ಅದಕ್ಕೆ ಸಮನಾದ ಬೇರೆಯ ಕೋರ್ಸ್ ಮಾಡುತ್ತಿದ್ದರೆ ಈ ವಿದ್ಯಾರ್ಥಿವೇತನಕ್ಕೆ ಅರ್ಹರಲ್ಲ
ಒಂದು ಹಂತದ ಶಿಕ್ಷಣ ಮುಗಿಸಿ ಅದಕ್ಕೆ ಸಮನಾದ ಇನ್ನೊಂದು ಕೋರ್ಸ್ ಆಯ್ಕೆ ಮಾಡಿಕೊಂಡರೆ ಉದಾ: ಪ್ರಥಮ ಬಿ.ಎಸ್ಸಿ ನಂತರ ಪ್ರಥಮ ಬಿ.ಎ ಅಥವಾ ಬಿ.ಕಾಂ ನಂತರ ಬಿ.ಎ ಅಥವಾ ಒಂದು ವಿಷಯದಲ್ಲಿ ಎಂ.ಎ ಮುಗಿಸಿ ಇನ್ನೊಂದು ವಿಷಯದಲ್ಲಿ ಎಂ.ಎ ಮಾಡುವ ವಿದ್ಯಾರ್ಥಿಗಳು ಅರ್ಹರಲ್ಲ
ಒಂದು ವೃತ್ತಿ ಶಿಕ್ಷಣ ಪೂರ್ಣಗೊಳಿಸಿದ ನಂತರ ಉದಾಹರಣೆಗೆ ಎಲ್ಎಲ್ ಬಿ ನಂತರ ಬಿ.ಟಿ ಅಥವಾ ಬಿ.ಎಡ್ ಮಾಡಲಿಚ್ಚಿಸುವವರು ವಿದ್ಯಾರ್ಥಿವೇತನಕ್ಕೆ ಅರ್ಹರಲ್ಲ