ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ವಿದ್ಯಾಭ್ಯಾಸದಲ್ಲಿ ನಿರತರಾಗಿರುವ, ಶಿಕ್ಷಣವನ್ನು ಪೂರ್ಣಗೊಳಿಸಿರುವ ಅಥವಾ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿರುವ ನಮ್ಮ ಯುವಜನರಿಗಾಗಿ ವಿವಿಧ ಇಲಾಖೆಗಳ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿವೆ, ಸೌಲಭ್ಯಗಳನ್ನು ನೀಡುತ್ತಿವೆ, ಮತ್ತು ವ್ಯಾಸಂಗ/ಕೌಶಲ್ಯವೃದ್ಧಿಯ ಅವಕಾಶಗಳನ್ನು ಕಲ್ಪಿಸುತ್ತಿವೆ. ಜೊತೆಗೆ ಶಿಕ್ಷಣಕ್ಕಾಗಿ, ವ್ಯಾಪಾರ ನಡೆಸುವುದಕ್ಕಾಗಿ ಮತ್ತು ಉದ್ಯೋಗಗಳನ್ನು ಸೃಷ್ಟಿಸುವುದಕ್ಕಾಗಿ ಬ್ಯಾಂಕುಗಳು ಹಲವು ಆರ್ಥಿಕಸೇವೆಗಳನ್ನು ನೀಡುತ್ತಿವೆ.
ಇಂಥ ಸೌಕರ್ಯಗಳನ್ನು ಬಹುಸಂಖ್ಯೆಯ ಸಂಸ್ಥೆಗಳು ನೀಡುತ್ತಿರುವುದರಿಂದ ಯುವಜನತೆಗೆ ಈ ಎಲ್ಲ ಸೇವೆಗಳನ್ನು ಕುರಿತ ಪೂರ್ಣ ಮಾಹಿತಿ ಇರುವುದಿಲ್ಲ. ನಾಲ್ಕು ಹಂತಗಳಲ್ಲಿ ಯುವಜನಾಂಗ ಕವಲುದಾರಿಗಳ ಅಂಚಿನಲ್ಲಿ ನಿಂತು ಮಾರ್ಗದರ್ಶನವನ್ನು ಅಪೇಕ್ಷಿಸುತ್ತವೆ:
- 10ನೇ ತರಗತಿ ಪೂರ್ಣಗೊಳಿಸಿದ ನಂತರ"
- ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ನಂತರ
- ಪದವಿ ವ್ಯಾಸಂಗವನ್ನು ಪೂರೈಸಿದ ನಂತರ
- ಸ್ನಾತಕೋತ್ತರ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ ನಂತರ
ಯುವಸಬಲೀಕರಣ ಕೇಂದ್ರಗಳು ಈ ಎಲ್ಲ ಸ್ತರಗಳ ಹಿತಾಸಕ್ತಿಯನ್ನು ರಕ್ಷಿಸುವತ್ತ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿವೆ.